ವೈಟ್‌ಬೋರ್ಡ್, ಸ್ಲೈಡ್ ಮತ್ತು ದಾಖಲೆಯನ್ನು ತ್ವರಿತವಾಗಿ ಸೆರೆಹಿಡಿಯಿರಿ. OneNote ಅದನ್ನು ಟ್ರಿಮ್ ಮಾಡುತ್ತದೆ ಮತ್ತು ಓದಲು ಸುಲಭವಾಗುವಂತೆ ವರ್ಧಿಸುತ್ತದೆ. ಟೈಪ್ ಮಾಡಿರುವ ಪಠ್ಯವನ್ನು ಸಹ ನಾವು ಗುರುತಿಸುತ್ತೇವೆ, ಹೀಗಾಗಿ ನೀವು ಅದಕ್ಕಾಗಿ ನಂತರ ಶೋಧಿಸಬಹುದು.
ಸ್ಟೈಲಸ್ ಬಳಸಿಕೊಂಡು ಬೋರ್ಡ್‌ನಿಂದ ರೇಖಾಚಿತ್ರವನ್ನು ರಚಿಸಿ. ಟೈಪಿಂಗ್‌ಗಿಂತ ಕೈ ಬರಹವೇ ಮೇಲು ಎಂದು ನಿಮಗನಿಸಿದರೆ ನಿಮ್ಮ ಎಲ್ಲಾ ಟಿಪ್ಪಣಿಗಳನ್ನು ಕೈಯಿಂದಲೇ ಬರೆಯಿರಿ.
ಉಪನ್ಯಾಸದ ಎಲ್ಲ ಪದಗಳನ್ನು ಬರೆಯಬೇಡಿ-ಪ್ರಮುಖ ಭಾಗಗಳನ್ನು ಬರೆದುಕೊಂಡರೆ ಸಾಕು. OneNote ನಿಮ್ಮ ಟಿಪ್ಪಣಿಗಳನ್ನು ಆಡಿಯೊಗೆ ಲಿಂಕ್ ಮಾಡುತ್ತದೆ, ಇದರಿಂದಾಗಿ ನೀವು ಪ್ರತಿಯೊಂದು ಟಿಪ್ಪಣಿಯನ್ನು ಬರೆದುಕೊಳ್ಳುವಾಗ ಏನನ್ನು ಹೇಳುತ್ತಿದ್ದಾರೆ ಎಂಬುದರ ಮೇಲೆ ತ್ವರಿತವಾಗಿ ಗಮನಹರಿಸಬಹುದು.
ಪಠ್ಯ, ಮಾಡಬೇಕಾದ ಪಟ್ಟಿಗಳು ಮತ್ತು ಕೋಷ್ಟಕಗಳಿಗಾಗಿ ವೇಗವಾಗಿರುವಂತೆ ಮತ್ತು ಸುಲಭವಾಗಿರುವಂತೆ OneNote ಅನ್ನು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸಗಳ ಕುರಿತು ಚಿಂತಿಸದಿರಿ, ನೀವು ಬಯಸಿದ ಪುಟದಲ್ಲಿ ಎಲ್ಲಿಯಾದರೂ ಟೈಪ್ ಮಾಡಿ.
ನೀವು ಅವರ ಇಮೇಲ್ ಹೊಂದಿದ್ದರೆ, ಅವರೊಂದಿಗೆ ಹಂಚಿಕೊಳ್ಳಬಹುದು. ಪ್ರಾರಂಭಿಸಲು ಇದು ಸುಲಭ ಮತ್ತು ವೇಗವಾಗಿದೆ.
ನೀವು ಒಂದೇ ಕೊಠಡಿಯಲ್ಲಿರಿ ಅಥವಾ ಕ್ಯಾಂಪಸ್‌ನಲ್ಲಿರಿ, ನೈಜ ಸಮಯದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿ. ಪರಿಷ್ಕರಣೆ ಅಂಕಗಳು ಯಾರು ಯಾವುದರ ಮೇಲೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನಿಮಗೆ ತಿಳಿಸುತ್ತದೆ.
ತರಗತಿ, ಕೊಠಡಿ, ಕಂಪ್ಯೂಟರ್ ಲ್ಯಾಬ್ ಅಥವಾ ಕಾಫಿ ಶಾಫ್ ಎಲ್ಲಿಯೇ ಇರಿ-ಯಾವುದೇ ಸಾಧನದಲ್ಲಿ ನೀವು ಒಟ್ಟಿಗೆ ಕಾರ್ಯನಿರ್ವಹಿಸಬಹುದು. ಯಾರಾದರೂ ಆಫ್‌ಲೈನ್‌ಗೆ ಹೋದಾಗಲೂ ಸಹ, OneNote ಎಲ್ಲವನ್ನು ನಿಮಗಾಗಿ ಒಟ್ಟಿಗೆ ಸ್ವಯಂಚಾಲಿತವಾಗಿ ಸಿಂಕ್ ಮಾಡುತ್ತದೆ.
ಬಹಳಷ್ಟು ಪ್ರಾಜೆಕ್ಟ್‌ಗಳಿಗೆ ವೆಬ್ ಸಂಶೋಧನೆ ಅತ್ಯವಶ್ಯಕ. ಒಂದೇ ಕ್ಲಿಕ್ ಮೂಲಕ ಯಾವುದೇ ಬ್ರೌಸರ್‌ನಲ್ಲಿ ಯಾವುದೇ ವೆಬ್ ಪುಟವನ್ನು ಸೆರೆಹಿಡಿಯಿರಿ. ಪುಟದಲ್ಲಿ OneNote ನಲ್ಲಿ ವ್ಯಾಖ್ಯಾನಿಸಿ.
ನಿಮ್ಮ ಟಿಪ್ಪಣಿಗಳೊಂದಿಗೆ ಉಪನ್ಯಾಸದ ಸ್ಲೈಡ್‌ಗಳು ಮತ್ತು ಕಾಗದಗಳನ್ನು ಉಳಿಸಿಕೊಳ್ಳಿ. ಸ್ಟೈಲಸ್ ಬಳಸಿಕೊಂಡು ಟೈಪಿಂಗ್ ಅಥವಾ ಕೈಬರಹದ ಮೂಲಕ ಅವುಗಳ ಮೇಲೆ ಅಥವಾ ಪಕ್ಕದಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳಿ.
ಫೋಟೋಗಳು ಅಥವಾ ಮುದ್ರಿತ ಪ್ರತಿಗಳ ಮೇಲೆ ಬರೆಯಿರಿ. ನಿಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸ್ಟಿಕೀ ಟಿಪ್ಪಣಿಗಳಂತೆ ಆಯೋಜಿಸಿ. ಅಂಚುಗಳಲ್ಲಿ ಬರೆಯುವ ಮೂಲಕ ಕಾಮೆಂಟ್ ಮಾಡಿ.
ಫೈಲರ್ ಅಥವಾ ಪೈಲರ್? OneNote ಎರಡನ್ನೂ ಇಷ್ಟಪಡುತ್ತದೆ. ನೋಟ್‌ಬುಕ್‌ಗಳು ಮತ್ತು ವಿಭಾಗಗಳನ್ನು ರಚಿಸುವ ಮೂಲಕ ನಿಮ್ಮ ಟಿಪ್ಪಣಿಗಳು ಮತ್ತು ಪ್ರಾಜೆಕ್ಟ್‌ಗಳನ್ನು ಒಟ್ಟಾಗಿ ಇರಿಸಿಕೊಳ್ಳಿ. ನೀವು ಟೈಪ್ ಮಾಡಿದ, ಕ್ಲಿಪ್ ಮಾಡಿದ ಇಲ್ಲವೇ ಕೈಬರಹದ ಯಾವುದೇ ಪಠ್ಯವನ್ನು ಶೋಧಿಸಿ ಮತ್ತು ಸುಲಭವಾಗಿ ಪಡೆದುಕೊಳ್ಳಿ.